ಹತ್ತು ಹಲವು ವಿರೋಧ, ಭಾರೀ ಆಕ್ರೋಶಗಳ ನಂತ್ರ ಪರಿಷ್ಕøತ ಪಠ್ಯದ ವಿವಾದ, ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ವಿವಾದಿತ ಪಠ್ಯಗಳನ್ನ ಮಾರ್ಪಾಡು ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಅಂಬೇಡ್ಕರ್, ಕುವೆಂಪು, ಸುರಪುರದ ರಾಜರು, ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳು ಸೇರಿದಂತೆ ವಿವಾದಕ್ಕೆ ಕಾರಣವಾಗಿದ್ದ, ಏಳು ಪಠ್ಯಗಳ ತಿದ್ದುಪಡಿಗೆ ಸರ್ಕಾರ ಆದೇಶ ಹೊರಡಿಸಿದೆ. ಮುಂದೆ ಯಾವುದಾದರು ಪಠ್ಯದ ಬಗ್ಗೆ ಪರಿಷ್ಕರಣೆ ಒತ್ತಾಯ ಕೇಳಿ ಬಂದ್ರೆ ಪರಿಶೀಲನೆ ಮಾಡಿ ಮಾರ್ಪಾಡು ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ. ಮಾರ್ಪಾಡು ಪಠ್ಯಗಳನ್ನು ಶೀಘ್ರವೇ ಪ್ರತ್ಯೇಕವಾಗಿ ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು.. ಸಭೆ ಕರೆದು ಕೆಲ ಬದಲಾವಣೆ ಮಾಡಿದ್ದೇವೆ. ಎಲ್ಲಾ ಪ್ರತಿಗಳೊಂದಿಗೆ ದೇವೇಗೌಡರಿಗೆ ಉತ್ತರ ಕಳುಹಿಸುತ್ತೇವೆ ಎಂದಿದ್ದಾರೆ. ಈ ಮಧ್ಯೆ, ಸಿಎಂ ಭೇಟಿ ಮಾಡಿದ ಕಾಗಿನೆಲೆ ಶ್ರೀಗಳು, ಕನಕದಾಸರ ಪಠ್ಯವನ್ನು ಒಂದು ಸಾಲಿಗೆ ಇಳಿಸಿರೋ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಲೋಪ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
#publictv #bigbulletin #hrranganath